ಸಿಡಿಲಿನ ಅಬ್ಬರಕ್ಕೆ ನಡುಗಿದ ಚಾರ್ಮಾಡಿ ಘಾಟಿ- ವಿಡಿಯೋ ವೈರಲ್ - ಚಾರ್ಮಾಡಿ ಘಾಟಿ ಗುಡ್ಡಕ್ಕೆ ಸಿಡಿಲು ಬಡಿದ ವಿಡಿಯೋ ವೈರಲ್
ಬೆಳ್ತಂಗಡಿ ತಾಲೂಕಿನ ಕೆಲವು ಕಡೆ ಮಳೆ ಅಬ್ಬರಿಸಿದೆ. ಈಗಾಗಲೇ ಉರಿ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ಸ್ವಲ್ಪ ಮಟ್ಟಿಗೆ ತಂಪಾದ ವಾತಾವರಣ ನಿರ್ಮಾಣವಾಗಿದೆ. ಗುಡುಗು ಸಿಡಿಲಿನ ಅಬ್ಬರ ಸಹ ಜೋರಾಗಿದ್ದು, ಚಾರ್ಮಾಡಿ ಘಾಟಿಯಲ್ಲಿ ಗುಡ್ಡಕ್ಕೆ ಸಿಡಿಲು ಬಡಿದಿರುವ ವಿಡಿಯೋವೊಂದು ವೈರಲ್ ಆಗಿದೆ.