ಕರ್ನಾಟಕ

karnataka

ETV Bharat / videos

ನಮ್‌ ಪ್ರಾಣ ತಿನ್ನೋಕೇ ಬರ್ತಾವೆ... ಜಾಸ್ತಿ ಆಯ್ತು ಇವುಗಳ ಅಟಾಟೋಪ! - The elephants are from kodagu

By

Published : Sep 7, 2019, 7:36 PM IST

ಬೇಡ ಬೇಡ ಬರಬೇಡ್ರೋ ಅಂತೀವಿ. ಆದರೂ ಕೇಳ್ತಿಲ್ಲ ಹಾಳಾದ್ವು, ಹಾಳ್‌ ಮಾಡೋಕೆ ಅಂತಾ ಯದ್ವಾತದ್ವಾ ತೋಟಕ್ಕೆ ನುಗ್ತವೆ. ಮಕ್ಕಳು ಶಾಲೆಗೆ ಹೋಗ್ತಿಲ್ಲ, ಕೂಲಿ ಆಳುಗಳು ಕೆಲಸಕ್ಕೆ ತೋಟಕ್ಕೆ ಬರ್ತಿಲ್ಲ. ಒಬ್ಬೊಬ್ಬರೇ ಹೊರಗೆ ಹೋಗೋದಕ್ಕೂ ಹೆದರಿಕೆ. ರಾತ್ರಿ ಕನಸ್ಸಲ್ಲೂ ಅವುಗಳದ್ದೇ ಕಾಟ ಕಣ್ರೀ.. ಹೊತ್ತಿಲ್ಲ, ಗೊತ್ತಿಲ್ಲ.. ಯಾವಾಗ ಬೇಕು ಆವಾಗ, ಎಲ್ಲೆಂದರಲ್ಲಿ ಹೀಗೆ ದಾಳಿ ಇಟ್ಬಿಡ್ತವೆ. ಅಪ್ಪಿತಪ್ಪಿ ಯಾರಾದರೂ ಎದುರಿಗೆ ಸಿಕ್ರೆ ಎದೆ ಒಡೆದೇ ಹೋಗ್ಬಿಡುತ್ತೆ. ತೋಟದಲ್ಲಿ ಹೇಗೆ ನುಗ್ಗಿವೆ ನೋಡಿ.. ಇವುಗಳ ಹಾವಳಿಯಿಂದ ಬೆಳೆಗಳೆಲ್ಲ ಹಾಳಾಗ್ತಿವೆ. ಇದನ್ನ ತಡೆದುಕೊಳ್ಳೋದೇ ಕಷ್ಟ, ಅಂತಹದರಲ್ಲಿ ತೋಟದಲ್ಲಿ ಒಬ್ಬರೋ ಇಬ್ಬರೋ ಕೆಲಸ ಮಾಡೋದಕ್ಕೆ ಈಗ ಹೆದರುವ ಸ್ಥಿತಿಯಿದೆ.

ABOUT THE AUTHOR

...view details