ನಾಲ್ಕು ವರ್ಷಗಳ ಬಳಿಕ ಸುವರ್ಣ ಮುಖಿ ನದಿಯಲ್ಲಿ ಹರಿದ ನೀರು - suvarna mukhi river fill in rain water
ತುಮಕೂರು ಜಿಲ್ಲೆಯ ಬಹುತೇಕ ಬಯಲುಸೀಮೆ ಪ್ರದೇಶದಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಲ್ಕು ವರ್ಷಗಳಿಂದ ಬತ್ತಿ ಹೋಗಿದ್ದ ಮಧುಗಿರಿ ತಾಲೂಕಿನ ಸುವರ್ಣ ಮುಖಿ ನದಿಯಲ್ಲಿ ನೀರು ಹರಿಯುತ್ತಿದ್ದು ಸುತ್ತಮುತ್ತಲ ರೈತಾಪಿ ವರ್ಗದಲ್ಲಿ ಸಂತಸ ತಂದಿದೆ.