ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ ನಿಮಿತ್ತ ತವರು ಜಿಲ್ಲೆಯಲ್ಲಿ ಆರೋಗ್ಯ ಶಿಬಿರ - ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ಅವರ 78 ನೇ ವರ್ಷದ ಹುಟ್ಟು ಹಬ್ಬವನ್ನು ತವರು ಜಿಲ್ಲೆ ಶಿವಮೊಗ್ಗದಲ್ಲಿ ಅವರ ಅಭಿಮಾನಿ ಬಳಗ ಆರೋಗ್ಯ ಶಿಬಿರ ನಡೆಸುವ ಮೂಲಕ ಆಚರಣೆ ಮಾಡಿದೆ. ನಗರದ ವೀರಶೈವ ಸಮುದಾಯ ಭವನದಲ್ಲಿ ನಡೆದ ಆರೋಗ್ಯ ಶಿಬಿರವನ್ನು ಬೆಕ್ಕಿನ ಕಲ್ಮಠದ ಮುರುಘಾರಾಜೇಂದ್ರ ಸ್ವಾಮಿಗಳು ಉದ್ಘಾಟನೆ ಮಾಡಿದರು. ಶಿಬಿರದಲ್ಲಿ ಎಲ್ಲ ರೀತಿಯ ಆರೋಗ್ಯದ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ಬೆಳಗ್ಗೆಯಿಂದ ಸಂಜೆ ತನಕ ನಡೆಯುವ ಶಿಬಿರದ ಉಸ್ತುವಾರಿಯನ್ನು ನಾರಾಯಣ ಹೃದಯಾಲಯ ಹೊತ್ತಿದೆ.