ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಿಕ್ಕಂತ ನೇಮಿಸಿದ್ರೆ, ಈ ಸಿಬ್ಬಂದಿ ಮಾಡಿದ್ದೇನು ನೋಡಿ! - ಕೊರೊನಾ ರೋಗ
ತುಮಕೂರು: ಮಹಾಮಾರಿ ಕೊರೊನಾ ಮಾರಣಾಂತಿಕ ಕಾಯಿಲೆ ಅಂತ ರಾಜ್ಯದ ತುಂಬಾ ಕಟ್ಟೆಚ್ಚರ ವಹಿಸಿದ್ರೆ, ತುಮಕೂರು ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ಸಹಾಯಕರೊಬ್ಬರು ಬೇಕಾಬಿಟ್ಟಿ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸುವ ದೃಶ್ಯ ಭಾರಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ತಕ್ಷಣ ಎಚ್ಚೆತ್ತುಕೊಂಡು ಬೇಜವಾಬ್ದಾರಿತನದಿಂದ ಕೆಲಸ ನಿರ್ವಹಿಸಿದ ಆರೋಗ್ಯ ಸಹಾಯಕನನ್ನು ಅಮಾನತು ಮಾಡಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.