'ಇಸ್ರೋಗೆ ಮೋದಿ ಕಾಲಿಟ್ಟಿದ್ದೇ ಚಂದ್ರಯಾನ-2ಗೆ ಅಪಶಕುನವಾಯ್ತು'! ಹೆಚ್ಡಿಕೆ ವ್ಯಂಗ್ಯ - ಚಂದ್ರಯಾನ-2ಗೆ ಅಪಶಕುನ
ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೈಲ್ಮೈಯನ್ನು ಸ್ಪರ್ಶಿಸುವುದನ್ನು ನೋಡಲು ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದರು. ಆದ್ರೆ, ಈ ಯೋಜನೆಗೆ 2008-2009ರ ಕಾಂಗ್ರೆಸ್ ಸರ್ಕಾರದ ಸಂಪುಟ ಸಭೆ ಅನುಮೋದನೆ ನೀಡಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಚಂದ್ರಯಾನ ಉಡಾವಣೆ ಮಾಡಿರುವ ಹಿನ್ನೆಲೆಯಲ್ಲಿ ಇಡೀ ಯೋಜನೆಯ ಕ್ರೆಡಿಟ್ ತೆಗೆದುಕೊಳ್ತಿದ್ದಾರೆ.ಇದಕ್ಕಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು ಅವರು ನಗರಕ್ಕೆ ಬಂದ್ರು. ಅವರು ಕಾಲಿಟ್ಟಿದ್ದೇ ತಡ, ಇಸ್ರೋ ವಿಜ್ಞಾನಿಗಳಿಗೆ ಎಲ್ಲೋ ಒಂದು ಕಡೆ ಅಪಶಕುನ ಆಯ್ತೋ ಏನೋ ಗೊತ್ತಿಲ್ಲ. ಚಂದ್ರಯಾನ-2 ಸರಿಯಾಗಿ ಲ್ಯಾಂಡ್ ಆಗಲಿಲ್ಲ ಎಂದು ಹೆಚ್ಡಿಕೆ ವ್ಯಂಗ್ಯವಾಡಿದ್ರು.