ಪತ್ನಿ ಜತೆ ಹೆಚ್ ಡಿ ದೇವೇಗೌಡರಿಂದ ಶೃಂಗೇರಿಯಲ್ಲಿ ಹೋಮ,ಯಾಗ.. - ಶೃಂಗೇರಿಯಲ್ಲಿ ದೇವೇಗೌಡರ ಹೋಮ, ಯಾಗ ಆರಂಭ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಜತೆಗೆ ಶೃಂಗೇರಿಯ ಶಾರದೆಯ ಪೀಠಕ್ಕೆ ತೆರಳಿದ್ದಾರೆ. ಶಾರದಾಂಬೆ ಸನ್ನಿಧಾನದಲ್ಲಿ ದೊಡ್ಡಗೌಡರು 5 ದಿನಗಳ ಯಾಗ ಇಂದು ಆರಂಭಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಆರು ವರ್ಷದಿಂದ ಇಲ್ಲಿಗೆ ಬರ್ತಿದ್ದೇನೆ. ನನ್ನ ಆರೋಗ್ಯಕ್ಕಾಗಿ ವಿಶೇಷ ಪೂಜೆ ಮಾಡ್ತಿರುವೆ ಅಂತಾ ಹೇಳಿದರು.