ಹಾವೇರಿ ಸಿನಿ ರಸಿಕರಿಗೆ ಮನರಂಜನೆ ಉಣ ಬಡಿಸಿದ ಮನೋಹರ್ ಚಿತ್ರಮಂದಿರ ಬಂದ್ - Haveri news
ಹಾವೇರಿ ನಗರದ ಪ್ರಥಮ ಚಿತ್ರಮಂದಿರ ಮನೋಹರ್ ಬಂದ್ ಆಗಿರುವುದು ಸಿನಿ ರಸಿಕರಿಗೆ ಬೇಸರ ತಂದಿದೆ. ಸುಮಾರು 7 ದಶಕಗಳ ಕಾಲ ಕನ್ನಡ, ತೆಲುಗು, ಹಿಂದಿ ಸೇರಿ ವಿವಿಧ ಭಾಷೆಗಳ ಚಿತ್ರಗಳನ್ನ ಪ್ರದರ್ಶಿಸಿದ ಮನೋಹರ್ ಇದೀಗ ಗೋದಾಮಾಗಿ ಪರಿವರ್ತನೆಯಾಗುತ್ತಿದೆ. ಪ್ರೇಕ್ಷಕರ ಕೊರತೆ ಸೇರಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ಚಿತ್ರಮಂದಿರ, ಕೊರೊನಾದಿಂದಾಗಿ ಬಾಗಿಲು ಹಾಕುವಂತೆ ಮಾಡಿದೆ.