ಆ್ಯಸಿಡ್ ದಾಳಿ ಸಂತ್ರಸ್ತೆಗೆ ಹೆಚ್ಚಿನ ಪರಿಹಾರವೂ ಇಲ್ಲ... ಕಿಡಿಗೇಡಿಯ ಕಾಟವೂ ತಪ್ಪಲಿಲ್ಲ! - acid case of haveri
ಆಕೆ ಸ್ನಾತಕೋತ್ತರ ಪದವೀಧರಳಾದ ಸುಂದರ ಯುವತಿ. ಗಾರ್ಮೆಂಟ್ಸ್ ಒಂದರಲ್ಲಿ ದುಡಿದು ತಿಂಗಳಿಗೆ ಇಪ್ಪತ್ತೊಂದು ಸಾವಿರ ವೇತನ ಪಡೆಯುತ್ತಿದ್ದಳು. ಆದರೆ ವ್ಯಾಸಂಗದ ವೇಳೆ ಆಕೆಗೆ ಪರಿಚಯವಾದ ಯುವಕ ಇನ್ನಿಲ್ಲದ ಕಥೆ ಹೇಳಿ ಪ್ರೀತಿಸುವ ನಾಟಕ ಮಾಡಿದ್ದಾನೆ. ವಿಷಯ ತಿಳಿದ ಯುವತಿ ಹುಡುಗನನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಯುವತಿ ಮೇಲೆ ಆ್ಯಸಿಡ್ ಎರಚಿದ್ದು, ಘಟನೆಯಲ್ಲಿ ಯುವತಿ ಕೈ-ಕಾಲು, ಮುಖಕ್ಕೆ ಗಾಯಗಳಾಗಿವೆ. ಆದರೆ ಅಂದು ಸರ್ಕಾರ ನೀಡಿದ್ದ 25 ಸಾವಿರ ರೂ. ಪರಿಹಾರ ಹಣ ಬಿಟ್ಟರೆ ಯುವತಿಗೆ ಸೂಕ್ತವಾದ ಪರಿಹಾರ ಬಂದಿಲ್ಲ. ಇತ್ತ ಜೈಲಿನಿಂದ ಬೇಲ್ ಮೇಲೆ ಬಂದಿರುವ ಆರೋಪಿ ಪ್ರಸಾದ ಜೀವಬೆದರಿಕೆ ಹಾಕುತ್ತಿದ್ದಾನಂತೆ. ಸರ್ಕಾರ ಈ ಸಂತ್ರಸ್ತೆಗೆ ಸೂಕ್ತ ಪರಿಹಾರ ಮತ್ತು ಕೆಲಸದ ಭದ್ರತೆ ಒದಗಿಸುವ ಮೂಲಕ ನೆರವಿನ ಹಸ್ತ ಚಾಚಬೇಕಿದೆ.