ಹೂಗಳಿಂದ ಕಂಗೊಳಿಸುತ್ತಿದೆ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಭಜಕ - Haveri
ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ರಸ್ತೆ ವಿಭಜಕ ಇದೀಗ ಹೂಗಳಿಂದ ಕಂಗೊಳಿಸುತ್ತಿದೆ. ರಸ್ತೆ ವಿಭಜಕದುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೂಗಳ ಗಿಡಳನ್ನು ನೆಟ್ಟಿದೆ. ಈ ಗಿಡಗಳು ಇದೀಗ ಹೂ ಬಿಟ್ಟಿದ್ದು, ಕಣ್ಣಿಗೆ ಮುದ ನೀಡುತ್ತಿವೆ. ದಾಸವಾಳ, ಹೊನ್ನರಿಕೆ, ಕಣಗಲ ಸೇರಿದಂತೆ ವಿವಿಧ ಬಗೆಯ ಹೂಗಳು ಪ್ರಯಾಣಿಕರ ಆಯಾಸವನ್ನು ಕಡಿಮೆ ಮಾಡುತ್ತಿವೆ. ರಾತ್ರಿ ವೇಳೆ ಎದುರಿಗೆ ಬರುವ ವಾಹನಗಳ ಬೆಳಕು ತಡೆಯಲು ನೆಡಲಾಗಿರುವ ಈ ಗಿಡಗಳು ಇದೀಗ ಹೂಗಳಿಂದ ನೋಡುಗರ ಗಮನ ಸೆಳೆಯುತ್ತಿವೆ.