ಮಾಲತೇಶ ದೇವಸ್ಥಾನದ ಅದ್ಧೂರಿ ಕಾರ್ಣಿಕೋತ್ಸವ: ಗೊರವಪ್ಪ ನುಡಿದ ಭವಿಷ್ಯವೇನು? - ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರಿನ ಪ್ರಸಿದ್ಧ ಮಾಲತೇಶ ದೇವಸ್ಥಾನ ನ್ಯೂಸ್
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರಿನ ಪ್ರಸಿದ್ಧ ಮಾಲತೇಶ ದೇವಸ್ಥಾನದ ಬೆಟ್ಟದಲ್ಲಿ ಇಂದು ಕಾರ್ಣಿಕೋತ್ಸವ ನಡೆಯಿತು. 15 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಪ್ಪ ಪ್ರಸ್ತುತ ವರ್ಷದ ಭವಿಷ್ಯ ನುಡಿದು, ಬಿಲ್ಲಿನಿಂದ ಕೆಳಗೆ ಧುಮುಕಿದ. ಭೂಮಂಡಲದಲ್ಲಿ ಮುತ್ತಿನಮಳೆ ಗರಿತೈತಲೇ ಪರಾಕ್ ಎಂದು ಗೊರವಪ್ಪ ಕಾರ್ಣಿಕ ನುಡಿದ. ಕಾರ್ಣಿಕ ನುಡಿದ ಗೊರವಪ್ಪ ಕೆಳಗೆ ಧುಮುಕ್ಕಿದ್ದಂತೆ ಭಕ್ತರು ಗೊರವಪ್ಪನನ್ನ ಹಿಡಿದರು. ಹಾವೇರಿ ಜಿಲ್ಲೆಯ ಪ್ರಮುಖ ಮೈಲಾರಲಿಂಗೇಶ್ವರ ದೇವಸ್ಥಾನಗಳಲ್ಲಿ ಆಡೂರು ಮಾಲತೇಶ ದೇವಸ್ಥಾನ ಸಹ ಒಂದು. ಇಲ್ಲಿ ಮೈಲಾರಲಿಂಗೇಶ್ವರನನ್ನ ಮಾಲತೇಶ, ಗುಡ್ಡದಯ್ಯ ಸೇರಿದಂತೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.