ಬಡವರ ಪಾಲಿನ ಸಂಜೀವಿನಿಯಾದ ಹಾವೇರಿ ಜಿಲ್ಲಾಸ್ಪತ್ರೆ: ವೈದ್ಯರ ಸೇವೆಗೆ ರೋಗಿಗಳ ಸಂತಸ
ಹಾವೇರಿ: ಜಿಲ್ಲಾಸ್ಪತ್ರೆ ಇದೀಗ ಬಡವರ ಪಾಲಿನ ಸಂಜೀವಿನಿಯಾಗಿದ್ದು, ಲಾಕ್ಡೌನ್ ಆದ ನಂತರ ಬಡವರ ಪಾಲಿನ ಧನ್ವಂತರಿಯಾಗಿದೆ. ಕೊರೊನಾ ವೈರಸ್ ಭಯದಿಂದ ಖಾಸಗಿ ಆಸ್ಪತ್ರೆಗಳು ಬಹುತೇಕ ವೈದ್ಯರು ಕ್ಲಿನಿಕ್‌ಗಳ ಬಾಗಿಲು ತೆರೆದಿಲ್ಲ. ಇದರಿಂದಾಗಿ ರೋಗಿಗಳು ಜಿಲ್ಲಾಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ಹೊರಾಂಗಣದಲ್ಲಿ ವೈದ್ಯರು ಟೇಬಲ್ ಹಾಕಿಕೊಂಡು ಕುಳಿತುಕೊಳ್ಳುವ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಒಳರೋಗಿಗಳಿಗೂ ಯಾವುದೇ ತೊಂದರೆಯಾಗುತ್ತಿಲ್ಲ. ವೈದ್ಯರ ಈ ಸೇವೆ ರೋಗಿಗಳಿಗೆ ಸಂತಸ ತಂದಿದೆ.