ಆಧುನಿಕ ಯುಗದಲ್ಲೂ ಶತಮಾನಗಳ ಹಿಂದಕ್ಕೆ ಕೊಂಡೊಯ್ಯುವ ‘ಗೌಳಿದೊಡ್ಡಿ’..! - Haveri district Goulidoddi village news
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೌಳಿದೊಡ್ಡಿ ಗ್ರಾಮಕ್ಕೆ ಶತಮಾನಗಳ ಹಿಂದೆ ಮಹಾರಾಷ್ಟ್ರದಿಂದ ಹಲವು ಕುಟುಂಬಗಳು ವಲಸೆ ಬಂದು ಇಲ್ಲಿ ನೆಲೆಸಿವೆ. ಹೈನುಗಾರಿಕೆಯನ್ನ ಪ್ರಮುಖ ವೃತ್ತಿಯಾಗಿಸಿಕೊಂಡಿರುವ ಈ ಕುಟುಂಬಗಳು ಆಧುನಿಕತೆಯ ಸ್ಪರ್ಷಕ್ಕೆ ಒಳಗಾಗಿಲ್ಲ. ಕಾಡಿನಲ್ಲಿ ಎಮ್ಮೆಗಳನ್ನು ಮೇಯಿಸುವುದು, ಅವುಗಳಿಗೆ ಹುಲ್ಲು ತರುವುದು, ಇವರ ನಿತ್ಯದ ಕಾಯಕ. ಎಮ್ಮೆಗಳಿಂದ ಬರುವ ಹಾಲನ್ನ ಮಾರಿ ಜೀವನ ಸಾಗಿಸುತ್ತಾರೆ. ಶಿಗ್ಗಾಂವಿಯಿಂದ ಸುಮಾರು 20 ಕಿ.ಮೀ. ದೂರವಿರುವ ಗೌಳಿದೊಡ್ಡಿಗೆ ಇಲ್ಲಿಯವರೆಗೆ ಸೂಕ್ತವಾದ ರಸ್ತೆ, ಚರಂಡಿ, ನಲ್ಲಿ ನೀರು, ವಿದ್ಯುತ್ ವ್ಯವಸ್ಥೆಯಿಲ್ಲ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ...