13 ಹಳ್ಳಿಗಳಲ್ಲಿ ಸಂಚಾರ.... ಹಾವೇರಿ ಜನರನ್ನು ಬೆಚ್ಚಿಬೀಳಿಸಿದೆ ಸೋಂಕಿತನ ಟ್ರಾವೆಲ್ ಹಿಸ್ಟರಿ - ಕೊರೊನಾ ಸೋಂಕಿತ 13 ಹಳ್ಳಿಗಳಲ್ಲಿ ಸಂಚಾರ
ಹಾವೇರಿ ಜಿಲ್ಲೆಯಲ್ಲಿ ದೃಢಪಟ್ಟ 3ನೇ ಕೊರೊನಾ ಪ್ರಕರಣ ಜಿಲ್ಲೆಯ ಜನರನ್ನ ಬೆಚ್ಚಿಬೀಳಿಸಿದೆ. ಪಿ-853 ರ ಟ್ರಾವೆಲ್ ಹಿಸ್ಟರಿ ನೋಡಿ 13 ಕ್ಕೂ ಅಧಿಕ ಹಳ್ಳಿಗಳ ಜನ ಆತಂಕದಲ್ಲಿದ್ದಾರೆ. ಪಿ-853 ಲಾರಿ ಚಾಲಕನಾಗಿದ್ದು ಮೂರು ಬಾರಿ ಮುಂಬೈಗೆ ಹೋಗಿ ಬಂದಿದ್ದಾನೆ. ಅಲ್ಲದೆ ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ಶಿಗ್ಗಾವಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಮಾವು ಖರೀದಿಸಿದ್ದಾನೆ. ಈತ ಹೋಗಿ ಬಂದಿರುವ ಗ್ರಾಮಗಳ ಗ್ರಾಮಸ್ಥರು ಆತಂಕದಲ್ಲಿದ್ದು ಪ್ರಥಮ ಸಂಪರ್ಕದಲ್ಲಿದ್ದವರ ಲ್ಯಾಬ್ ರಿಪೋರ್ಟ್ ಎದುರು ನೋಡುತ್ತಿದ್ದಾರೆ.