ಹಾವೇರಿ: ಅಂತಿಮಯಾತ್ರೆ ಮೇಲೆ ಕೊರೊನಾ ಕರಿಛಾಯೆ - HaveriCorona concert
ಹಾವೇರಿ: ವಿಶ್ವದ ನಿದ್ದೆಗೆಡಿಸಿದ ಕೊರೊನಾ ವೈರಸ್ನ ಕರಾಳ ಛಾಯೆ ಇದೀಗ ಅಂತಿಮಯಾತ್ರೆ ಮೇಲೆಯೂ ಸಹ ಪ್ರಭಾವ ಬೀರಿದೆ. ಹಾವೇರಿಯ ಅಶ್ವಿನಿ ನಗರದ ನಿವಾಸಿ 75 ವರ್ಷದ ವೃದ್ಧೆ ಮಲ್ಲಮ್ಮ ವಯೋಸಹಜ ಖಾಯಲೆಯಿಂದ ಮೃತಪಟ್ಟಿದ್ದರು. ಸಾವಿರಾರು ಬಂದುಗಳನ್ನು ಹೊಂದಿದ್ದ ಮಲ್ಲಮ್ಮನ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದು ಮಾತ್ರ ಕೇವಲ ಬೆರಳೆಣಿಕೆಯಷ್ಟು ಜನ.