ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ಹೆಮ್ಮೆಯ ಪುತ್ರರು... ನಿವೃತ್ತ ಯೋಧರಿಗೆ ಕಾದಿತ್ತು ಸರ್ಫ್ರೈಜ್ - haveri latest news
ಹಾವೇರಿ ತಾಲೂಕಿನ ಅಗಡಿ ಗ್ರಾಮದ ಇಬ್ಬರು ಯೋಧರು ಹದಿನೇಳು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ತಮ್ಮ ಹುಟ್ಟೂರಿಗೆ ಮರಳಿದ್ದಾರೆ. ಹಾವೇರಿ ತಾಲೂಕಿನ ಅಗಡಿ ಗ್ರಾಮದ ಇಮ್ತಿಯಾಜ್ ಹಾವನೂರು ಮತ್ತು ಮಹೇಶ ಕುಂಬಾರ ತಮ್ಮ ಸೇವಾವಧಿ ಮುಗಿಸಿ ಸ್ವಗ್ರಾಮಕ್ಕೆ ವಾಪಾಸ್ಸಾಗಿದ್ದಾರೆ. ಜಮ್ಮುಕಾಶ್ಮೀರ, ಶ್ರೀನಗರ, ಮಣಿಪ್ಪುರ, ನಾಗಾಲ್ಯಾಂಡ್ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿ ಊರಿಗೆ ಮರಳಿದ ಯೋಧರಿಗೆ ಗ್ರಾಮದಲ್ಲಿ ಅದ್ಧೂರಿ ಸ್ವಾಗತವೇ ಕಾದಿತ್ತು. ಅದರ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.