ನಿತ್ಯ 35 ವಾರ್ಡ್‌ಗಳಿಂದ 75 ಟನ್ ತ್ಯಾಜ್ಯ ವಿಲೇವಾರಿ: ಸಾಂಕ್ರಾಮಿಕ ಕಾಯಿಲೆಗಳ ಭಯದಲ್ಲಿ ಸ್ಥಳೀಯರು - ಸುತ್ತಮುತ್ತಲ ಗ್ರಾಮಸ್ಥರು ವಾಸನೆಗೆ ಹೈರಾಣಾ
ಹಾಸನ: ನಗರದ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗದ ಕಾರಣ ಅಗಿಲೆ ಸುತ್ತಮುತ್ತಲ ಗ್ರಾಮಸ್ಥರು ವಾಸನೆಗೆ ಹೈರಾಣಾಗಿದ್ದಾರೆ. ನಗರದ ಹೊರವಲಯ ಪ್ರದೇಶ ಅಗಿಲೆ ಗ್ರಾಮಕ್ಕೆ ಹೋಗುತ್ತಿದ್ದಂತೆ ಮೂಗಿಗೆ ಬಟ್ಟೆ ಕಟ್ಟಿಕೊಂಡು ಹೋಗಬೇಕಾಗಿದೆ. ನಗರಸಭೆ ಮೀಸಲಿಟ್ಟಿರುವ ಅಗಿಲೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ನಿರ್ವಹಣೆ ಸರಿಯಾಗಿ ಆಗದ ಕಾರಣ ಸುತ್ತಲಿನ ಗ್ರಾಮಸ್ಥರ ಬದುಕು ಚಿಂತಾಜನಕವಾಗಿದೆ.