ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಹಾಸನ ರೋಟರಿ ಸಂಸ್ಥೆ ಸಲಾಂ - Medical Officer Dr. Krishnamurti
ಹಾಸನ: ರೋಟರಿ ಸಂಸ್ಥೆ ಕೊರೊನಾ ಆತಂಕವನ್ನು ದೂರವಾಗಿಸಲು ಹಗಲಿರುಳೆನ್ನದೇ ಹೋರಾಡಿದ ಆರೋಗ್ಯ ಇಲಾಖೆಯ ವೈದ್ಯರು ಮತ್ತು ವೈದ್ಯಕೀಯ ಸೇವೆಯಲ್ಲಿ ಸಹಕರಿಸಿದ ಸಿಬ್ಬಂದಿಗೆ ಇಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೂಗುಚ್ಛ ನೀಡಿ ಸಿಹಿ ಹಂಚಿ ಜಿಲ್ಲೆಯ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಹಾಸನ ರೋಟರಿ ಸದಸ್ಯರು ಹಾಗೂ ಆನ್ಸ್ ಸಂಸ್ಥೆಯ ಸದಸ್ಯರುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇನ್ನು ಜಿಲ್ಲೆಯ ವೈದ್ಯಾಧಿಕಾರಿ ಡಾ. ಕೃಷ್ಣಮೂರ್ತಿ ಅವರು ರೋಟರಿ ಸಂಸ್ಥೆಯ ಕಾರ್ಯಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ರೋಟರಿ ಗವರ್ನರ್ ಎಸ್.ಕೆ.ನಾಗೇಂದ್ರನ್, ಡಿ.ಎಂ ಜಲೇಂದ್ರ , ಉಪರಾಜ್ಯಪಾಲ ಪಾಲಾಕ್ಷ ಇನ್ನಿತರರು ಉಪಸ್ಥಿತರಿದ್ದರು.