ಆಲೂರಿನಲ್ಲಿ ಗಜರಾಜನ ಆಟಾಟೋಪ... ರಾಜಾರೋಷವಾಗಿ ನಡೆದಾಡ್ತಿದೆ ಒಂಟಿ ಸಲಗ - Hassan Aluru Elephant came to the Village
ಹಾಸನ : ಆಲೂರು ತಾಲೂಕಿನ ಕಲ್ಲರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಒಂಟಿ ಸಲಗವೊಂದು ಸವಾರಿ ಮಾಡುವ ಮೂಲಕ ಜನರನ್ನು ಆತಂಕಕ್ಕೀಡು ಮಾಡಿದೆ. ಭರತ್ತೂರು -ಮಗ್ಗೆ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ, ಗ್ರಾಮದ ರಸ್ತೆಯಲ್ಲಿ ಯಾವ ಅಂಜಿಕೆಯೂ ಇಲ್ಲದೆ ರಾಜಾರೋಷವಾಗಿ ನಡೆದುಕೊಂಡು ಹೋಗಿದ್ದು. ಆನೆಯನ್ನು ಕಂಡ ಜನರು ಭಯಭೀತರಾಗಿದ್ದಾರೆ.