ಯುವ ಉತ್ಸಾಹಿಗಳಿಗೆ ಯಶಸ್ಸಿನ ಗುಟ್ಟು ಹೇಳಿಕೊಟ್ಟ ನಟ ರಮೇಶ್ ಅರವಿಂದ್ - actor ramesh aravind speech about youths
ಯುವಜನತೆ ಸ್ಪಷ್ಟ ಗುರಿ ಹೊಂದಿದ್ದರೆ ಯಾವುದೂ ಅಸಾಧ್ಯವೇನಲ್ಲ. ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ. ಈ ಬಗ್ಗೆ ಯುವಕರು ಚಿಂತಿಸಬೇಕು ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಯುವಕರಿಗೆ ಯಶಸ್ಸಿನ ಗುಟ್ಟು ಹೇಳಿದರು. ದಾವಣಗೆರೆ ಜಿಲ್ಲೆಯ ಹರಿಹರ ಸಮೀಪದ ಪಂಚಮಸಾಲಿ ಮಠದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಹರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಉತ್ಸಾಹಿ ಯುವಕರಿಗೆ ಹಲವು ಸಂದೇಶಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು.