ಧಾರವಾಡ: ವರುಣನಾರ್ಭಟಕ್ಕೆ ಕೆರೆಯಂತಾದ ರಸ್ತೆ, ಸ್ಥಳೀಯರ ಪರದಾಟ - Dharwad in heavy rain
ರಾತ್ರಿಯಿಡೀ ಮಳೆ ಸುರಿದ ಹಿನ್ನೆಲೆ ನಗರದ ಹಾಸ್ಮಿನಗರದ ರಸ್ತೆ ಹಳ್ಳದಂತಾಗಿದ್ದು, ಮನೆಯಿಂದ ಹೊರಹೋಗಲು ನಿವಾಸಿಗಳು ಪರದಾಟ ನಡೆಸಿದ್ದಾರೆ. ಹಾಸ್ಮಿನಗರ 1ನೇ ಕ್ರಾಸ್‌ನಲ್ಲಿ ನೀರು ತುಂಬಿಕೊಂಡಿದ್ದು, ಅಲ್ಲಿನ ನಿವಾಸಿಗಳು ಬಕೆಟ್ ನಲ್ಲಿ ನೀರು ತುಂಬಿ ಹೊರ ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ನೋಡುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.