ಹಂಪಿಯಲ್ಲಿ ತೆಪ್ಪೋತ್ಸವ, ತುಂಗಭದ್ರೆಗೆ ಆರತಿ ಸಂಭ್ರಮ - Vidyaranya Bhrarati Swamiji
ಹೊಸಪೇಟೆ (ಬಳ್ಳಾರಿ): ಹಂಪಿಯ ತುಂಗಭದ್ರಾ ನದಿಯಲ್ಲಿಂದು ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ಹಾಗೂ ತುಂಗಭದ್ರಾ ಆರತಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ನದಿಯ ದಡದಲ್ಲಿ ವೇದಿಕೆ ನಿರ್ಮಿಸಿ ಭುವನೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಬಳಿಕ ನದಿಗೆ ಬಾಗಿನ ಅರ್ಪಿಸಲಾಯಿತು. ನಂತರ ತುಂಗಭದ್ರಾ ಆರತಿ ಮಹೋತ್ಸವ, ತೆಪ್ಪೋತ್ಸವ ಜರುಗಿದ್ದು, ವಿದ್ಯಾರಣ್ಯ ಭಾರತಿ ಸ್ವಾಮೀಜಿ ಪೂಜಾ ಕೈಂಕಾರ್ಯಗಳ ನೇತೃತ್ವವನ್ನು ವಹಿಸಿದ್ದರು. ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಹಾಗೂ ಅರಣ್ಯ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಎಡಿಸಿ ಮಂಜುನಾಥ ಭಾಗಿಯಾಗಿದ್ದರು.