ರಾಯಚೂರಿನಲ್ಲಿ ಅದ್ಧೂರಿ ಹನುಮ ಜಯಂತಿ - undefined
ಹನುಮ ಜಯಂತಿಯ ಅಂಗವಾಗಿ ರಾಯಚೂರಿನ ಗಾಂಧಿ ವೃತ್ತದ ಬಳಿಯ ಶ್ರೀ ಹನುಮಾನ್ ಮಂದಿರದಲ್ಲಿ ತೆಕ್ಕೆ ಬಲಿ ಉತ್ಸವ ಮತ್ತು ಮಂಗಳೂರಿನ ಚಂಡೇ ವಾದ್ಯ ತಂಡದಿಂದ ಅದ್ಧೂರಿ ನೃತ್ಯ ಮೇಳ ನಡೆಯಿತು. ಬೆಳಿಗ್ಗೆಯಿಂದ ರಾಮಭಕ್ತ ಶ್ರೀ ಹನುಮಾನ್ ಜಯಂತಿ ಅಂಗವಾಗಿ ಆಂಜನೇಯನಿಗೆ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆ ಸೇರಿ ಧಾರ್ಮಿಕ ಕಾರ್ಯಕ್ರಮ ನಡೆದವು. ರಾತ್ರಿ 7ರಿಂದ ಮಂಗಳೂರು ತಂಡದಿಂದ ಚಂಡೆ ವಾದ್ಯ ನಡೆಯಿತು. ಹನುಮನ ಭಕ್ತರಿಗಂತೂ ಇದು ಒಳ್ಳೇ ಮನರಂಜನೆ ನೀಡಿತು.