ಕೈಮಗ್ಗ ಅಂಗಡಿಯ ಉಗ್ರಾಣದಲ್ಲಿ ಬೆಂಕಿ: ಅಪಾರ ಪ್ರಮಾಣದ ಬಟ್ಟೆ ಹಾನಿ - ಜನತಾ ಬಜಾರ್
ಕೈಮಗ್ಗ ಅಂಗಡಿಯೊಂದರ ಉಗ್ರಾಣದಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಬೆಂಕಿ ಹೊತ್ತಿ ಅಪಾರ ಪ್ರಮಾಣದ ಬಟ್ಟೆ ಸುಟ್ಟು ಭಸ್ಮವಾಗಿರುವ ಘಟನೆ ಹುಬ್ಬಳ್ಳಿ ಜಿಲ್ಲೆಯ ಜನತಾ ಬಜಾರ್ನಲ್ಲಿ ನಡೆದಿದೆ. ಬಾಬುರಾಮ್ ಸೋಲಂಕಿ ಎಂಬುವವರಿಗೆ ಸೇರಿದ್ದ ಹರಿಯಾಣ ಹ್ಯಾಂಡಲೂಮ್ಸ್ ಹೆಸರಿನ ಅಂಗಡಿಯ ಉಗ್ರಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಬಟ್ಟೆ ಹಾನಿಯಾಗಿದೆ. ಇನ್ನು ಸ್ಥಳಕ್ಕೆ ಹೆಸ್ಕಾಂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.