ಕರುನಾಡಿನ ಗತವೈಭವ ಸಾರುವ ಹಂಪಿ ಅಚ್ಯುತರಾಯನ ದೇಗುಲ - Historical Site Hampi News Achutarayana Temple News
ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಹಲವಾರು ಸ್ಥಳಗಳಲ್ಲಿ ಹಂಪಿ ಸರ್ವ ಶ್ರೇಷ್ಠ ಎಂದರೆ ಉತ್ಪ್ರೇಕ್ಷೆಯಾಗದು. ಇದು ನಾಡಿನ ಗತಕಾಲದ ವೈಭವವನ್ನು ಜಗತ್ತಿಗೆ ಸಾರುವ ಐತಿಹಾಸಿಕ ತಾಣ. ಹಂಪಿಯ ವಿರುಪಾಕ್ಷನನ್ನು ನೋಡೋಕೆ ದೇಶ ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರ್ತಾರೆ. ಆದ್ರೆ, ಹಂಪಿಯಲ್ಲಿ ಹೆಚ್ಚು ಮಂದಿಗೆ ಪರಿಚಿತವಲ್ಲದ ಅದೆಷ್ಟೋ ಸುಂದರ ದೇವಾಲಯಗಳಿವೆ. ಅದರಲ್ಲಿ ಅಚ್ಯುತರಾಯ ದೇವಾಲಯವೂ ಒಂದು.