ಹಲಸೂರು ಕೆರೆ ಸೌಂದರ್ಯ ಹೆಚ್ಚಿಸಿದ ಯೋಧರು! - ಬೆಂಗಳೂರಿನ ಹಲಸೂರು ಸ್ವಚ್ಛತೆ
ಬೆಂಗಳೂರಿನ ಹಲಸೂರು ಕೆರೆ ಸ್ವಚ್ಛತೆಯಿಂದ ಕಳೆಗಟ್ಟಿದ ಸೌಂದರ್ಯ. ಎಲ್ಲೆಡೆ ಚಾಚಿಕೊಂಡಿದ್ದ ತ್ಯಾಜ್ಯ, ಪ್ಲಾಸ್ಟಿಕ್, ರಾಜಕಾಲುವೆಯಿಂದ ಹರಿದು ಬಂದಿದ್ದ ಕಸವನ್ನು ಯೋಧರು, ಬಿಬಿಎಂಪಿ ಸಿಬ್ಬಂದಿ ಬೋಟ್ ಬಳಸಿ ಸ್ವಚ್ಛಗೊಳಿಸಿದರು. ಕೆರೆಗೆ ಮತ್ತೆ ಜೀವಕಳೆ ಬಂದಿದ್ದು, ಬಿಬಿಎಂಪಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಉಳಿದ ಕೆರೆಗಳು ಹೀಗೆ ಜೀವಕಳೆ ಪಡೆದುಕೊಳ್ಳಲಿ ಎಂಬುದು ಸಾರ್ವಜನಿಕರ ಆಶಯ.