ಹೊಲಗಳಿಗೆ ತೆರಳಿ ಬೆಳೆ ವೀಕ್ಷಣೆ ಮಾಡಿದ ಹಾನಗಲ್ ತಹಶೀಲ್ದಾರ್.. - ಕಳಪೆ ಸೋಯಾಬಿನ್ ಬೀಜ
ರೈತರ ಹೊಲಗಳಿಗೆ ತೆರಳಿ ಹಾನಗಲ್ ತಹಶೀಲ್ದಾರ್ ಎರ್ರಿಸ್ವಾಮಿಯವರು ಸೋಯಾಬಿನ್ ಬೆಳೆ ವೀಕ್ಷಣೆ ಮಾಡಿದರು. ಕಳಪೆ ಸೋಯಾಬಿನ್ ಬೀಜಗಳನ್ನ ಬಿತ್ತಿದ್ದರಿಂದ ಬೀಜಗಳು ಮೊಳಕೆ ಒಡೆಯದೇ ನಾಶವಾಗಿವೆ. ಇದರಿಂದ ಕಂಗಾಲದ ರೈತರು ಪರಿಹಾರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದರು. ಇದನ್ನು ಮನಗಂಡ ತಹಶೀಲ್ದಾರ್ ಅವರು ತಾಲೂಕಿನ ಮಾರನಬೀಡ ಗ್ರಾಮದ ಕೆಲ ಕೃಷಿ ಭೂಮಿಗೆ ಭೇಟಿ ನೀಡಿದರು.