ಈಗಿನ ಬಿಎಸ್ವೈ ಸ್ಥಿತಿಗೆ ಅವರ ಮಗ ವಿಜಯೇಂದ್ರನೇ ಕಾರಣ : ಹೆಚ್.ವಿಶ್ವನಾಥ್ - ಹೆಚ್.ವಿಶ್ವನಾಥ್ ಹೇಳಿಕೆ
ನಾನು ಬಿಜೆಪಿಗೆ ಸೇರ್ಪಡೆಯಾದಾಗ ಒಂದು ಮಾತು ಹೇಳಿದ್ದೆ, ಈ ರಾಜ್ಯದಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಯಾರಾದರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ ಅಂತಾ.. ಆದರೆ, ನೀವು ಮುಖ್ಯಮಂತ್ರಿ ಆದ ಮೇಲೆ ನಿಮ್ಮ ನಾಲಿಗೆ ಮತ್ತು ನಿಮ್ಮ ಕೈ ಎರಡನ್ನು ನಿಮ್ಮ ಮಗ ವಿಜಯೇಂದ್ರನ ಕೈಯಲ್ಲಿ ಕೊಟ್ಟುಬಿಟ್ರಿ, ಇದು ದುರಂತ. ಬಾಂಬೇ ಡೇಸ್ ಪುಸ್ತಕ ಬರೆಯುತ್ತೇನೆ. ಅದರಲ್ಲಿ ಎಲ್ಲವೂ ಇರಲಿದೆ. ಸರ್ಕಾರ ರಚನೆ ಹಾಗೂ ಪತನ ಹೇಗೆ ಆಯ್ತು ಎಂಬ ಬಗ್ಗೆ ಉಲ್ಲೇಖ ಮಾಡುತ್ತೇನೆ ಎಂದು ಮಾಜಿ ಸಚಿವ, ಹಾಲಿ ಬಿಜೆಪಿ ಎಂಎಲ್‌ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.