ಹಿಂದಿ ಭಾಷೆ ಹೇರಿದರೆ ಅದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ: ಹೆಚ್.ಕೆ.ಪಾಟೀಲ್ - ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ದೇಶ ಒಂದು ಭಾಷೆ ಹೇಳಿಕೆ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆ ಹೇರುವ ಪ್ರಯತ್ನವನ್ನು ಸ್ಪಷ್ಟಪಡಿಸುತ್ತದೆ. ಏನಾದರೂ ದಕ್ಷಿಣ ಭಾರತ ರಾಜ್ಯಗಳ ಮೇಲೆ ಒತ್ತಡದ ಮೂಲಕ ಹಿಂದಿ ಭಾಷೆಯನ್ನು ಹೇರಿದರೆ ಅದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಅದಕ್ಕಾಗಿ ಕೂಡಲೇ ಹಿಂದಿ ಹೇರಿಕೆಯನ್ನು ಕೈಬಿಡಬೇಕೆಂದು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದರು.