ಕರ್ನಾಟಕ

karnataka

ಕಾರ್ಮಿಕರ ಮನದಾಳ ಹಾಡಿನಲ್ಲಿ ಬಿಚ್ಚಿಟ್ಟ ಕಲಾವಿದ ಗುರುರಾಜ ಹೊಸಕೋಟೆ..

By

Published : May 4, 2020, 5:37 PM IST

Updated : May 4, 2020, 5:56 PM IST

ಬರ್ತೀವ ಬೆಂಗಳೂರು ನಮಸ್ಕಾರ..‌ ಶರಣು ಶರಣು ಬೆಂಗಳೂರಾ...ಕಾರ್ಮಿಕರು ಸೇರ್ತೀವಾ ನಮ್ಮ ಊರ... ಇದು ಪ್ರತಿಯೊಬ್ಬ ವಲಸೆ ಕಾರ್ಮಿಕನ ಅಂತರಂಗದ ನುಡಿ.. ಹತ್ತಾರು ವರುಷ ದುಡಿಯಲು ಕೆಲಸ ಕೊಟ್ಟು.. ಹೊಟ್ಟೆಗೆ ಹಿಟ್ಟು ನೀಡಿ, ಉಳಿಯಲು ಜಾಗ ಕೊಟ್ಟ ಬೆಂಗಳೂರನ್ನು ಕೋವಿಡ್-19 ಭೀತಿಯಿಂದಾಗಿ ತೊರೆಯಬೇಕಾದ ಪರಿಸ್ಥಿತಿ ಬಂದಿದೆ. ನಿತ್ಯ ಕಾರ್ಮಿಕರು ಇದೇ ನೋವಲ್ಲಿ ತಮ್ಮ ಊರ ಕಡೆಗೆ ಹೋಗುತ್ತಿರುವುದನ್ನು ಕಂಡ ಖ್ಯಾತ ಜಾನಪದ ಕಲಾವಿದ ಗುರುರಾಜ ಹೊಸಕೋಟೆಯವರು ಕಾರ್ಮಿಕರ ಕುರಿತು ಈ ಹಾಡು ಕಟ್ಟಿ ಹಾಡಿದ್ದಾರೆ. ಇವರ ಪುತ್ರ ರಾಜಗುರು ಈ ವಿಡಿಯೋ ಮಾಡಿದ್ದು, ರಂಗ ಕಲಾವಿದೆ ನಯನ ಸೂಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾರ್ಮಿಕನೊಬ್ಬ ಕೆಲಸ ಕೊಟ್ಟ, ಊಟ, ವಾಸಕ್ಕೆ ಜಾಗ ಕೊಟ್ಟ ಬೆಂಗಳೂರಿನ ಉಪಕಾರ ಯಾವತ್ತೂ ಮರೆಯಲ್ಲ.ಈಗ ನಮ್ಮ ಊರಿಗೆ ಹೊರಟಿದ್ದೇವೆ‌. ಶರಣು ಶರಣು ಬೆಂಗಳೂರು ಎಂದು ನೆನೆಯುತ್ತಾನೆ ಎಂದು ಹಾಡಿದ್ದಾರೆ.
Last Updated : May 4, 2020, 5:56 PM IST

ABOUT THE AUTHOR

...view details