ಸರ್ಕಾರಿ ಶಾಲೆ ಉಳಿಸಲು ಗುರು-ಶಿಷ್ಯರ ಸಂಗಮ...! - ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ
ಆ ಶಾಲೆಯಲ್ಲಿ ಓದಿ, ಗೆಳೆಯರೊಂದಿಗೆ ತುಂಟಾಟ ಮಾಡಿದ್ದ ಮಿತ್ರರೆಲ್ಲಾ ಒಂದೆಡೆ ಸೇರಿದ್ರು. ತಮ್ಮ ಬದುಕನ್ನು ರೂಪಿಸಿಕೊಟ್ಟ ಗುರುಗಳನ್ನು ಗೌರವಿಸಿದ್ದು ಮಾತ್ರವಲ್ಲದೇ, ತಮ್ಮೂರಿನ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಹಳೆ ವಿದ್ಯಾರ್ಥಿಗಳು ಗುರುಗಳಿಗೆ ಕ್ರೀಡಾಕೂಟ ಆಯೋಜಿಸಿ ಸಾರ್ಥಕ ಭಾವ ಮೆರೆದಿದ್ದಾರೆ.