ಕರ್ನಾಟಕ

karnataka

ETV Bharat / videos

ಗುರುಪೂರ್ಣಿಮೆ ಸಂಭ್ರಮ.. ಬಾಬಾ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ.. - ಕನ್ನಡ ವಾರ್ತೆ

By

Published : Jul 16, 2019, 9:44 PM IST

ಬೆಂಗಳೂರು: ಗುರು ಪೂರ್ಣಿಮೆ ಪ್ರಯುಕ್ತ ನಗರದಾದ್ಯಂತ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು. ಕೆಆರ್‌ಪುರ ಮತ್ತು ಭಟ್ಟರಹಳ್ಳಿಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರಗಳಲ್ಲಿ ಬೆಳಗ್ಗೆ 5ಗಂಟೆಯಿಂದಲೇ ವಿಶೇಷ ಪೂಜೆ ಜರುಗಿತು. ದೇವಾಲಯಗಳು ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಇಂದು ಗ್ರಹಣ ಇರುವ ಕಾರಣ ಸಂಜೆ ದೇವಸ್ಥಾನದ ಬಾಗಿಲು ಮುಚ್ಚುತ್ತಾರೆ ಎಂದು ಬೆಳಗ್ಗೆ ಜನ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಬಸವನಪುರ ವಾರ್ಡ್ ಪಾಲಿಕೆ ಸದಸ್ಯ ಜಯಪ್ರಕಾಶ್ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಿದ್ದರು.

ABOUT THE AUTHOR

...view details