ಗುರುನಾನಕ್ ಜಯಂತಿ: ಸಿಖ್ ಭಕ್ತರನ್ನು ಕೈಬೀಸಿ ಕರೆಯುತ್ತಿದೆ 'ಮಿನಿ ಪಂಜಾಬ್'ನ ಗುರುದ್ವಾರ - ಬೀದರ್ ಗುರುದ್ವಾರ
ಬೀದರ್: ಇಂದು ಗುರುನಾನಕ್ ಜಯಂತಿ (Guru Nanak Jayanti). ಹೀಗಾಗಿ ರಾಜ್ಯದ ಏಕೈಕ ಗುರುದ್ವಾರವಾದ ಬೀದರ್ನ ಗುರುದ್ವಾರದಲ್ಲಿ(Bidar gurdwara) ಸಂಭ್ರಮ ಮನೆಮಾಡಿದೆ. ಬೇರೆ ಬೇರೆ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶದಿಂದಲೂ ಸಿಖ್ ಭಕ್ತರು ಬೀದರ್ನತ್ತ ಮುಖ ಮಾಡುತ್ತಿದ್ದು, ಸಂಭ್ರಮ ಮನೆ ಮಾಡಿದೆ. ಸಿಖ್ಖರ ಧರ್ಮಗುರು ಗುರುನಾನಕ್ ಜಯಂತಿಯ ಈ ಘಳಿಗೆಯಲ್ಲಿ ಬೀದರ್ ಗುರುದ್ವಾರದ ಮಹತ್ವದ ಕುರಿತ ವಿಶೇಷ ವರದಿ ಇಲ್ಲಿದೆ.