ಕರ್ನಾಟಕ

karnataka

ETV Bharat / videos

ಪ್ರಕೃತಿಯ ಚೆಲುವ ಹೊರಸೂಸಿದ ಗುಲ್​ ಮೋಹರ್; ಇಲ್ಲಿದೆ ಸುಂದರ ದೃಶ್ಯ ಕಾವ್ಯ - Hubli news

By

Published : Jul 2, 2020, 1:23 PM IST

ನಾರಿಯರ ಮುಡಿಯನ್ನೂ ಏರದೆ, ದೇವರ ಪೂಜೆಗೂ ಹೋಗದೆ. ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಮೈದುಂಬಿ ಅರಳಿ ನಿಂತು ಪ್ರಕೃತಿ ಆರಾಧಕರ ಮನಸು ಸೂರೆಗೊಳಿಸುವ ಹೂವು ಎಂಬುದಿದ್ದರೆ ಅದು ಗುಲ್​ ಮೋಹರ್​​​ ಮಾತ್ರ. ಅಲ್ಲದೇ ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರಿಗೆ ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಿ, ಬಿಸಿಲ ಛಾಯೆಯನ್ನ ಸಹ ಮೈ ಮೇಲೆ ಬೀಳದ ಹಾಗೆ ಈ ಮರ ಸಮೃದ್ಧವಾಗಿ ಹರಡಿರುತ್ತೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಈ ಮರ ಜಿಲ್ಲೆಯ ಕಿಮ್ಸ್ ನಲ್ಲಿ ವಿಶಾಲವಾಗಿ ಹರಡಿಕೊಂಡಿದೆ.

ABOUT THE AUTHOR

...view details