ಕಡಪದಲ್ಲಿ ಕರ್ನಾಟಕದ ಭಕ್ತರಿಂದ ಗುಗ್ಗಳ ಪೂಜೆ.. ಗಮನ ಸೆಳೆದ ವೀರಭದ್ರ ಕುಣಿತ - ವಿಡಿಯೋ - ಆಂಧ್ರಪ್ರದೇಶ ಸುದ್ದಿ 2020
ಕಡಪ (ಆಂಧ್ರಪ್ರದೇಶ): ಕಡಪ ಜಿಲ್ಲೆಯ ರಾಯಚೋಟಿಯ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬಳ್ಳಾರಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಸೇರಿ ಕರ್ನಾಟಕದೆಲ್ಲೆಡೆಯಿಂದ ಬಂದ ಭಕ್ತರು, ದೇವರಿಗೆ ಪ್ರಿಯವಾದ ಗುಗ್ಗಳ ದೀಪೋತ್ಸವ ನೆರವೇರಿಸಿದರು. ಭಕ್ತರು ಭಜನೆ, ವೀರಭದ್ರ ಕುಣಿತ ಪ್ರದರ್ಶನ ಗಮನ ಸೆಳೆಯಿತು.