ಕೊರೊನಾ ಕ್ವಾಟ್ಲೆ...ಕೊಳೆತು ಉದುರುತ್ತಿರುವ ಪೇರಳೆ, ನಷ್ಟಕ್ಕೆ ಸಿಕ್ಕಿ ರೈತ ಈಗ ತರಗೆಲೆ - ಪೇರಳೆ ಹಣ್ಣು
ಕೊರೊನಾ ಹರಡುವಿಕೆ ತಡೆಯುವ ಸಲುವಾಗಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಇದರಿಂದ ಕೃಷಿಯನ್ನೆ ಅವಲಂಬಿಸಿದ ಕೆಲ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಬೆಳೆದ ಪೇರಳೆ ಬೆಳೆ ಇದೀಗ ಹಾಳಾಗಿ ಹಳ್ಳದ ಪಾಲಾಗುತ್ತಿದೆ. ಇಲ್ಲಿನ ಪೇರಳೆ ಹೊರ ರಾಜ್ಯಗಳಿಗೆ ಮಾರಾಟಕ್ಕೆ ಹೋಗುತ್ತಿತ್ತು. ಆದ್ರೆ ಇದೀಗ ಎಲ್ಲಾ ಮಾರ್ಕೆಟ್ ಬಂದ್ ಮಾಡಿರುವುದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.