ಮೈಸೂರಿನ ಸಂತ ಫಿಲೋಮಿನ ಚರ್ಚ್ನಲ್ಲಿ ಕ್ರೈಸ್ತ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ - ಮೈಸೂರು ಕ್ರಿಸ್ಮಸ್
ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಐತಿಹಾಸಿಕ ಸಂತ ಫಿಲೋಮಿನ ಚರ್ಚ್ನಲ್ಲಿ ಸರಳ ಹಾಗೂ ಸಂಪ್ರದಾಯಿಕವಾಗಿ ಕ್ರಿಸ್ಮಸ್ ಆಚರಿಸಲಾಗುತ್ತಿದೆ. ಅಶೋಕ ರಸ್ತೆಯಲ್ಲಿರುವ ಸಂತ ಫಿಲೋಮಿನ ಚರ್ಚ್ನಲ್ಲಿ ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಫಾದರ್ ಡಾ. ಕೆ.ವಿಲಿಯಂ ನೇತೃತ್ವದಲ್ಲಿ ಬಾಲ ಯೇಸುವಿನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ನಂತರ ಕೊಟ್ಟಿಗೆಯಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯಿತು. ಮಾಧ್ಯಮಗಳೊಂದಿಗೆ ಮಾತನಾಡಿದ ಫಾದರ್ ಡಾ. ಕೆ.ವಿಲಿಯಂ, ಸರ್ಕಾರದ ಸೂಚನೆಯಂತೆ ಸರಳ ಹಾಗೂ ಸಂಪ್ರದಾಯಿಕವಾಗಿ ಪೂಜೆ ಮಾಡಲಾಗಿದೆ. ಕೊರೊನಾ ಮುಕ್ತವಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.