ಚಿತ್ತಾ ತಂದ ಹರ್ಷ.. ಕೊಳವೆಬಾವಿಗಳಲ್ಲಿ ಉಕ್ಕುತ್ತಿದೆ ಜೀವಜಲ!: ವಿಡಿಯೋ - ಕೊಳವೆಬಾವಿಯಲ್ಲಿ ಉಕ್ಕುತ್ತಿರುವ ನೀರು
ಬರದನಾಡು ಚಿತ್ರದುರ್ಗದಲ್ಲಿ ಅಬ್ಬರಿಸಿದ ಚಿತ್ತಾ ಮಳೆಯಿಂದ ಅಂತರ್ಜಲ ಹೆಚ್ಚಾಗಿದೆ. ನೀರಿಲ್ಲದೆ ಬತ್ತಿ ಬರಿದಾಗಿದ್ದ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ. ಹಿರಿಯೂರು ತಾಲೂಕಿನ ಯಲ್ಲದಕೆರೆ ಗ್ರಾಮದಲ್ಲಿರುವ ಕಲ್ಯಾಣಿಗಳು, ಕೆರೆ ಸಂಪೂರ್ಣ ಭರ್ತಿಯಾದ ಪರಿಣಾಮ ಬತ್ತಿದ್ದ ಬೋರ್ವೆಲ್ಗಳಲ್ಲಿ ನೀರು ಉಕ್ಕುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
Last Updated : Oct 25, 2019, 9:51 PM IST