ಪ್ರತ್ಯೇಕ ವಿಜಯನಗರ ಜಿಲ್ಲೆಗೆ ಪಣ ತೊಟ್ಟಿರೋ ಆನಂದ್ ಸಿಂಗ್ ಕುರಿತು ಹಾಡು ಕಟ್ಟಿದ ಅಭಿಮಾನಿ - ಬಿಜೆಪಿ ಶಾಸಕ ಆನಂದಸಿಂಗ್
ಬಳ್ಳಾರಿ: ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಪಣತೊಟ್ಟಿರುವ ಬಿಜೆಪಿ ಶಾಸಕ ಆನಂದ ಸಿಂಗ್ ಅವರ ಅಭಿಮಾನಿವೋರ್ವ 'ಗೆದ್ದೇ ಗೆಲ್ತಾನಂತೆ ಅಂತಾ ಮುಂಚೆ ಹೇಳಿದ್ದೆ, ಮಗ ಕಡಲ ದಾಟಿ ಬರ್ತಾನೆ ಅಂತಾ ಕೂಗಿ ಹೇಳಿದ್ದೆ' ಎಂಬ ಹಾಡಿಗೆ ಆನಂದ್ ಸಿಂಗ್ರ ದೃಶ್ಯ ಸಂಕಲನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಜಯನಗರವನ್ನು ಜಿಲ್ಲೆಯನ್ನಾಗಿಸಲು ಈ ಹಾಡು ಈಗ ಮುನ್ನಲೆಗೆ ಬಂದಿದೆ.