ಪೌರಕಾರ್ಮಿಕರ ಪಾದಪೂಜೆ... ಟ್ರಾಫಿಕ್ ಪೊಲೀಸರಿಗೆ ಸನ್ಮಾನ - gratitude-for-corona-warriers
ಕೋವಿಡ್-19 ಮಹಾಮಾರಿಯನ್ನು ನಿಯಂತ್ರಿಸಲು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನಗರದ ನೈರ್ಮಲ್ಯ ಕಾಪಾಡುತ್ತಿರುವ ಪೌರಕಾರ್ಮಿಕರಿಗೆ ಬೆಂಗಳೂರಿನಲ್ಲಿ ಪಾದಪೂಜೆ ನಡೆಯಿತು. ಓಂ ಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಭಾರತಿನಗರ ಸೆಪ್ಪಿಂಗ್ಸ್ ರಸ್ತೆಯಲ್ಲಿರೋ ಓಂ ಶಕ್ತಿ ದೇವಸ್ಥಾನದ ಟ್ರಸ್ಟ್ ಮುಂದೆ 56 ಪೌರ ಕಾರ್ಮಿಕರಿಗೆ ಪಾದ ಪೂಜೆ ಮಾಡಿ, ಆಹಾರ ಕಿಟ್ ಮತ್ತು ಸೀರೆಗಳನ್ನ ನೀಡಿ ಧನ್ಯವಾದ ತಿಳಿಸಿದ್ರು. ಜೊತೆಗೆ ಸಂಚಾರಿ ಪೊಲೀಸರು ಮತ್ತು ಲಾ ಅಂಡ್ ಆರ್ಡರ್ ಪೊಲೀಸರನ್ನ ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಾಯ್ತು. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಸಾರ್ವಜನಿಕರಿಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕೋವಿಡ್ ವಾರಿಯರ್ಸ್ಗೆ ಧನ್ಯವಾದ ತಿಳಿಸಿದರು.