ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆದ ರೈತರು ಕಂಗಾಲು...ಮಳೆಯಿಂದ ನೆಲಕಚ್ಚಿದ ದ್ರಾಕ್ಷಿ, ಮಾವು - undefined
ದೇವನಹಳ್ಳಿ: ಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದೆ. ಬರಗಾಲದ ನಡುವೆಯೂ ದ್ರಾಕ್ಷಿ ಬೆಳೆಗಾರರು ಹಗಲು ರಾತ್ರಿ ಎನ್ನದೇ ದುಡಿದು ಉತ್ತಮ ಬೆಳೆ ಬೆಳೆದಿದ್ದರು. ಇನ್ನೇನು ಕಟಾವು ಮಾಡಬೇಕು ಅನ್ನುವಷ್ಟರಲ್ಲಿ ಎರಡು ಮೂರು ಗಂಟೆ ಧೋ.. ಅಂತ ಸುರಿದ ಭಾರಿ ಮಳೆ ಅನ್ನದಾತನ ನಿರೀಕ್ಷೆಗಳನ್ನು ಕೊಚ್ಚಿಕೊಂಡು ಹೋಗಿದೆ...