ಕಡಲ ತೀರದ ಜನರ ದಶಕದ ಕನಸು ನನಸಾಗುತ್ತಾ? - ಮಂಗಳೂರು ಬಂದರು ನಿರ್ಮಾಣ
ಕಡಲನಗರಿ ಮಂಗಳೂರಿನಲ್ಲಿ ಬಂದರು ಕೊರತೆ. 2010ರಲ್ಲಿ ಆರಂಭಿಸಲಾದ ಮೂರನೇ ಹಂತದ ಬಂದರಿಗೆ ಅನುದಾನದ ಕೊರತೆ. 1250 ಬೋಟ್ ಗಳಿದ್ದರೂ 300 ಬೋಟ್ ಗಳಿಗೆ ಲಂಗರು ಹಾಕಲು ಅವಕಾಶ.. ಹೀಗೆ ಸಾಲು ಸಾಲು ಸಮಸ್ಯೆಗಳಿದ್ದವು. ಇವೆಲ್ಲ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಮೀನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡುವಂತೆ ಇಲ್ಲಿನ ಜನ ಸರ್ಕಾರಕ್ಕೆ ಒತ್ತಾಯಿಸಿದ್ದರು... ಅದಕ್ಕೀಗ ಮುಕ್ತಿ ಸಿಗುವ ಸಾಧ್ಯತೆಗಳು ಗೋಚರಿಸ್ತಿವೆ.