ಯಾದಗಿರಿ: ಗ್ರಾಮ ಸಮರದಲ್ಲಿ ಆಟೋ ಚಾಲಕನಿಗೆ ಗೆಲುವು - ಯಾದಗಿರಿ ಗ್ರಾಮ ಪಂಚಾಯತ್ ಚುನಾವಣೆ ಸುದ್ದಿ
ಯಾದಗಿರಿ: ತಾಲೂಕಿನ ಅಲ್ಲಿಪುರ ಗ್ರಾ.ಪಂಚಾಯತಿಯ ವಾರ್ಡ್ ಸಂಖ್ಯೆ 3ರಲ್ಲಿ ಸ್ಪರ್ಧಿಸಿದ ಆಟೋ ಚಾಲಕ ಸೋಮು ಚವ್ಹಾಣ ಅಲ್ಲಿಪುರ ವಾರಿ ತಾಂಡಾರವರು 52 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಚಲಾವಣೆಯಾದ 712 ಮತಗಳ ಪೈಕಿ ಸೋಮು ಚವ್ಹಾಣ 382 ಮತಗಳನ್ನು ಪಡೆದರೆ, ಎದುರಾಳಿ ವೆಂಕಟೇಶ್ 330 ಮತಗಳನ್ನು ಪಡೆದರು. ಸೋಮು ಚವ್ಹಾಣ 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ 20 ವರ್ಷದಿಂದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವ ಚವ್ಹಾಣ ತಾಂಡಾದ ಜನರ ಒತ್ತಾಯಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿದ್ದರು.