ಹಾಸನದಲ್ಲಿ ಗೌರಿ ಹಬ್ಬದ ಸಂಭ್ರಮ: ಗೌರಿಗೆ ಬಾಗಿನ ಅರ್ಪಿಸಿದ ಸುಮಂಗಲಿಯರು - ಮುತ್ತೈದೆಯರಿಂದ ಬಾಗಿನ ಅರ್ಪಣೆ ನ್ಯೂಸ್
ಗೌರಿ ಹಬ್ಬದ ನಿಮಿತ್ತ ಪ್ರತಿವರ್ಷದಂತೆ ಈ ಬಾರಿಯೂ ಹಾಸನ ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಗೌರಿ ಪ್ರತಿಮೆಗೆ ಮುತ್ತೈದೆಯರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಗೌರಿಗೆ ಹೊಸ ಬಟ್ಟೆ, ಬಳೆ, ಅರಿಶಿಣ ಕುಂಕುಮ, ಅಕ್ಕಿ ಇಟ್ಟು ಪೂಜೆ ಮಾಡಿದರು. ವಿಶೇಷವಾಗಿ ಅಲಂಕಾರ ಮಾಡಲಾಗಿದ್ದ ಗೌರಿಗೆ ಸುಮಂಗಲಿಯರು ದೇವರ ನಾಮ ಹಾಡಿ ಪ್ರಾರ್ಥಿಸಿದರು. ನೂರಾರು ಮಹಿಳೆಯರು ದೇವಾಲಯಕ್ಕೆ ಆಗಮಿಸಿ ಬಾಗಿನ ಅರ್ಪಿಸಿ ಗೌರಿಹಬ್ಬ ಆಚರಿಸಿದ್ರು.