ಹೆಚ್ಡಿ ಕುಮಾರಸ್ವಾಮಿ ರಕ್ಷಣೆಗೆ ಸರ್ಕಾರ ಸಿದ್ದವಿದೆ: ಜಗದೀಶ್ ಶೆಟ್ಟರ್ - ಜಗದೀಶ್ ಶೆಟ್ಟರ್ ಲೆಟಸ್ಟ್ ನ್ಯೂಸ್
ಹುಬ್ಬಳ್ಳಿ: ಇಂದು ನಗರದ ಸಮಾಜ ಗಂಧರ್ವ ಹಾಲ್ನಲ್ಲಿ ನಡೆದ ಧರ್ಮಾಂಗೀಯ ದಿಗ್ವಿವಿಜಯ ಯಕ್ಷಗಾನ ಕಾರ್ಯಕ್ರಮಕ್ಕೆ ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಈಗಾಗಲೇ ಸಾಕಷ್ಟು ವಿಚಾರ ಹೇಳಿದ್ದಾರೆ. ನಾನು ಅದರ ಬಗ್ಗೆ ಏನು ಹೇಳುವುದಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಇನ್ನೂ ಹೆಚ್.ಡಿ ಕುಮಾರಸ್ವಾಮಿಗೆ ಬೆದರಿಕೆ ಪತ್ರ ಬಂದಿರುವ ಕುರಿತು ಪ್ರತಿಕ್ರಿಯಿಸಿ, ಬೆದರಿಕೆ ಪತ್ರದ ಕುರಿತು ಮಾಹಿತಿ ಇದ್ರೆ ದೂರು ನೀಡಲಿ, ಅವರಿಗೆ ಎಲ್ಲಾ ರೀತಿ ರಕ್ಷಣೆ ಕೊಡುವುದಕ್ಕೆ ಸರ್ಕಾರ ಸಿದ್ದವಿದೆ ಎಂದರು.