ಗೋವಿನಕೊಪ್ಪ ಬೀರಲಿಂಗೇಶ್ವರ ಜಾತ್ರೆ : ಬಂಡಾರ ಎರಚಿ ಹರಕೆ ತೀರಿಸಿದ ಭಕ್ತರು - ಗೋವಿನಕೊಪ್ಪ ಬೀರಲಿಂಗೇಶ್ವರ ಜಾತ್ರೆ
ಬಾಗಲಕೋಟೆ: ತಾಲೂಕಿನ ಗೋವಿನಕೊಪ್ಪ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ವಿಶಿಷ್ಟ ರೀತಿಯಲ್ಲಿ ಜರುಗುತ್ತದೆ. ಸುಮಾರು ಐದು ಕ್ವಿಂಟಲ್ದಲ್ಲಿ ತಯಾರಿಸಿರುವ ಗೋಧಿ ಹುಗ್ಗಿಯಲ್ಲಿ ಪೂಜಾರಿಗಳು ಕೈ ಹಾಕುವ ಮೂಲಕ ಭಕ್ತಿಯನ್ನು ಮೆರೆಯುತ್ತಾರೆ. ಪ್ರತಿವರ್ಷ ಶಿವರಾತ್ರಿ ಅಮವಾಸ್ಯೆ ದಿನದಂದು ನಡೆಯುವ ಜಾತ್ರೆಯ ಸಮಯದಲ್ಲಿ ವಿವಿಧ ಜಿಲ್ಲೆಗಳಿಂದ 20 ಪಲ್ಲಕಿಗಳು ಆಗಮಿಸಿ, ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡುತ್ತಾರೆ. ಈ ಸಮಯದಲ್ಲಿ ಭಕ್ತರು ಬಂಡಾರ ಎರಚುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ.