ಪ್ರವಾಹದಿಂದ ಪಾರಾದ್ರೂ ಸರ್ಕಾರದಿಂದ ಪಾರಾಗೋದು ಕಷ್ಟ, ತೊಗರಿ ತಗೋರಿಯಪ್ಪಾ... - ರಾಯಚೂರು ಸರ್ಕಾರಿ ಬೆಂಬಲ ಬೆಲೆ ಕೇಂದ್ರ ಸುದ್ದಿ
ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗದಿದ್ದಾಗ, ಸರ್ಕಾರ ಬೆಂಬಲ ಬೆಲೆ ಕೇಂದ್ರವನ್ನು ಪ್ರಾರಂಭಿಸುತ್ತೆ. ಸದ್ಯ ರಾಯಚೂರಿನಲ್ಲಿ ತೊಗರಿ ಇಳುವರಿ ಉತ್ತಮವಾಗಿದ್ದು ಸರಿಯಾದ ಬೆಲೆ ಇಲ್ಲದ ಕಾರಣ ಬೆಂಬಲ ಕೇಂದ್ರ ತೆರೆಯುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದ್ರೆ ಇದುವರೆಗೂ ತೋಗರಿ ಕೇಂದ್ರ ಪ್ರಾರಂಭವಾಗಿಲ್ಲ. ಇದರಿಂದ ಬೆಳೆ ಕೈತಪ್ಪಿ ಹೋಗುವ ಆತಂಕದಲ್ಲಿ ರೈತರಿದ್ದಾರೆ.