ಸರ್ಕಾರ ಉಳಿಸ್ತಾರಾ ಟ್ರಬಲ್ ಶೂಟರ್?ಯಾರಿಗೂ ಬಗ್ಗಲ್ಲ ಅಂತಿದ್ದಾರೆ ರೆಬೆಲ್ಸ್! - undefined
ಸರ್ಕಾರ ಉಳಿಸಿಕೊಳ್ಳಲು ಎಲ್ಲದಕ್ಕೂ ಸಿದ್ದವಾಗಿರುವ ಮೈತ್ರಿ ಪಕ್ಷಗಳು ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ. ಅತೃಪ್ತ ಶಾಸಕರ ಮನವೊಲಿಸಿಯೇ ತೀರುತ್ತೇನೆ ಎಂದು ಮುಂಬೈಗೆ ಬಂದಿರುವ ಡಿಕೆಶಿ ಪಟ್ಟುಬಿಡದೆ ಹೋಟೆಲ್ ಮುಂದೆ ಕಾಯುತ್ತಿದ್ದಾರೆ. 14 ಶಾಸಕರ ರಾಜೀನಾಮೆಯಿಂದ ಸಂಖ್ಯಾಬಲ ಕಳೆದುಕೊಂಡಿರುವ ಸರ್ಕಾರ, ಉರುಳುವ ಭೀತಿ ಎದುರಿಸುತ್ತಿದೆ. ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್,ಜೆಡಿಎಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಹಲವು ಬಾರಿ ಸರ್ಕಾರವನ್ನು ಕಾಪಾಡಿರುವ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಮೇಲೆ ಈ ಬಾರಿಯೂ ನಂಬಿಕೆ ಇಡಲಾಗಿದೆ.