ಮಂಡೆ ಬಿಸಿ ಯಾಕೆ ಸಂಡೇ ಮಜಾ ಮಾಡೋಣ,, ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿದ ಸರ್ಕಾರಿ ಅಧಿಕಾರಿಗಳು!
ಸರ್ಕಾರಿ ಕೆಲಸ ಅಂದ್ರೇ ಅದು ದೇವರ ಕೆಲಸ ಅಂತಾರೆ. ಅದರೂ ಎಷ್ಟೋ ಸರ್ಕಾರಿ ನೌಕರರು ತಾವು ತೆಗೆದುಕೊಳ್ಳುವ ಸಂಬಳಕ್ಕಾದರೂ ನಿಯತ್ತಾಗಿ ಕೆಲಸ ಮಾಡೋದಿಲ್ಲ. ಇದರ ಮಧ್ಯೆ ಗದಗ್ ಡಿಸಿ ಸಾಹೇಬ್ರು ಶನಿವಾರ ಮತ್ತು ಭಾನುವಾರವೂ ಡ್ಯೂಟಿ ಮಾಡಿ ಅಂತಾ ಆದೇಶಿಸಿದ್ರು. ಆದರೆ, ಅಧಿಕಾರಿಗಳು ಮಾತ್ರ ಕಚೇರಿಗಳಿಗೆ ಬೀಗ ಜಡಿದು ಆ ಕಡೆ ತಿರುಗಿಯೂ ನೋಡಿಲ್ಲ.