ಕಲ್ಯಾಣ ಕರ್ನಾಟಕ ಯೋಜನೆಗಳಿಗೆ ಎಳ್ಳು ನೀರು; ಸಾರ್ವಜನಿಕರಿಂದ ಆಕ್ರೋಶ - Umesh Jadhav from Kalabaragi MP
ಕಲಬುರಗಿ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಯೋಜನೆಗಳಿಗೆ ಒಂದೊಂದಾಗಿ ಎಳ್ಳು ನೀರು ಬಿಡುತ್ತಿವೆ. ಸರ್ಕಾರಗಳ ಧೋರಣೆ ವಿರುದ್ಧ ರೋಸಿ ಹೋಗಿರುವ ಜನತೆ ಸ್ಥಳೀಯ ನಾಯಕರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ತೆರಿಗೆ ಪಾವತಿಸುವ ಕಲ್ಯಾಣ ನಾಡಿನ ಮೇಲೆ ಸರ್ಕಾರದ ವಕ್ರದೃಷ್ಟಿ ಏಕೆ, ಈ ಭಾಗದ ಐವರು ಬಿಜೆಪಿ ಸಂಸದರು ಏನು ಮಾಡುತ್ತಿದ್ದೀರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.